ಆನ್‌ಲೈನಿನಲ್ಲಿ ಆಧಾರ್ ನೀಡಿದ್ರೆ 10 ನಿಮಿಷದಲ್ಲಿ ರೇಷನ್ ಕಾರ್ಡ್
ಹೊಸ ಕಾರ್ಡ್ ಮಾಡಿಸಿಕೊಳ್ಳಲು ಅನುಮತಿ ದೊರೆತಿದ್ದು ಇದಕ್ಕಾಗಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ ಸೈಟಿನಲ್ಲಿ ಅವಕಾಶ ನೀಡಲಾಗಿದೆ. ಇದಲ್ಲೇ ಕಳೆದ ಬಾರಿಗಿಂತಲೂ ಈ ಬಾರಿ ಸುಲಭವಾಗಿ ಕಾರ್ಡ್ ಮಾಡಿಸಲು ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಇದು ನಾಗರೀಕರಿಗೆ ಸಹಾಯವನ್ನು ಮಾಡಲಿದೆ.
ರಾಜ್ಯದಲ್ಲಿ ಹೊಸದಾಗಿ ರೇಷನ್ ಕಾರ್ಡ ಮಾಡಿಸುವ ಕಾರ್ಯಕ್ಕೆ ತಾತ್ಕಾಲಿಕವಾಗಿ ನೀಡಲಾಗಿದ್ದ ತಡೆಯೂ ತರೆವುಗೊಂಡಿದ್ದು, ಆನ್‌ಲೈನಿನಲ್ಲಿ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸುವ ಮತ್ತು ಈ ಹಿಂದಿನ ರೆಷನ್ ಕಾರ್ಡಿನಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಈ ಬಾರಿ ಅಕ್ರಮಗಳನ್ನು ತಡೆಯುವ ಸಲುವಾಗಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯೂ ಕಾರ್ಡುದಾರರಿಗೆ SMS ಕಳುಹಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಮೊದಲಿಗೆ https://ahara.kar.nic.in/home.aspx ವೆಬ್ ಸೈಟ್ ಅನ್ನು ಓಪನ್ ಮಾಡಿಕೊಳ್ಳಿ, ಇದಾದ ನಂತರದಲ್ಲಿ ಇ- ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ, ನಂತರದಲ್ಲಿ ಅನೇಕ ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅದರಲ್ಲಿ ಇ-ಪಡಿತರ ಚೀಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ
ಅನೇಕ ಆಯ್ಕೆಗಳು:
ಇ-ಪಡಿತರ ಚೀಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರದಲ್ಲಿ ಹಲವು ಆಯ್ಕೆಗಳು ಕಾಣಿಸಿಕೊಳ್ಳಿದ್ದು, ಹೊಸ ಪಡಿತರ ಚೀಟಿ ಮಾಡಿಸುವ ಆಯ್ಕೆ ಸೇರಿದಂತೆ ಹಲವು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಆಧಾರ್ ಆಪ್ ಡೇಟ್ ಸೇರಿದಂತೆ ವಿವಿಧ ಆಯ್ಕೆಗಳು ಅಲ್ಲಿ ಲಭ್ಯವಿದೆ.
ಕನ್ನಡ ಸೆಲೆಕ್ಟ್ ಮಾಡಿ: ನೀವು ಹೊಸ ಪಡಿತರ ಚೀಟಿಗಾಗಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರದಲ್ಲಿ ನಿಮಗೆ ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ ಕನ್ನಡ ಇಲ್ಲವೇ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕನ್ನಡವನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
ಇದಾದ ನಂತರದಲ್ಲಿ ಹೊಸ ಪಡಿತರ ಚೀಟಿಗಾಗಿ. ಉಳಿಸಲಾದ ಅರ್ಜಿ ಮತ್ತು ಅರ್ಜಿ ಹಿಂಪಡೆಯಲು ಎನ್ನುವ ಮೂರು ಆಯ್ಕೆಗಳು ಕಾಣಿಸಿಕೊಕೊಳ್ಳಲಿದೆ. ಇದರಲ್ಲಿ ಹೊಸ ಪಡಿತರ ಚೀಟಿಗಾಗಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಇದಾದ ನಂತರದಲ್ಲಿ ಕಾಣಿಸಿಕೊಳ್ಳುವ ವಿಂಡೋದಲ್ಲಿ ಎರಡು ಆಯ್ಕೆಗಳು ಕಾಣಿಸಿಕೊಳ್ಳಲಿದೆ.
ಆದ್ಯತಾ ಕುಟುಂಬ ಮತ್ತು ಆದ್ಯತೇತರ ಕುಟುಂಬ ಎಂಬ ಆಯ್ಕೆಗಳು ಕಾಣಿಸಿಕೊಳ್ಳಿದೆ. ಇದರಲ್ಲಿ ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು ಮುಂದುವರೆಯಿರಿ. ಇದರಲ್ಲಿ ನಿಮ್ಮ ಆಯ್ಕೆಯನ್ನು ತಿಳಿದುಕೊಳ್ಳಲು ಅವುಗಳ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನೀವು ಆಯ್ಕೆಯನ್ನು ಮಾಡಿಕೊಂಡ ನಂತರದಲ್ಲಿ ನಿಮ್ಮ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನೀಡಬೇಕಾಗಿದೆ. ಇದನ್ನು ನೀಡಿದ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್‌ಗೆ OTPಯೊಂದು ಬರಲಿದೆ.
ಇದಾದ ಮೇಲೆ ನಿಮ್ಮ ಮಾಹಿತಿಯೂ ಅಲ್ಲಿ ಕಾಣಿಸಿಕೊಳ್ಳಿದ್ದು, ಅದರ ಪಕ್ಕದಲ್ಲಿಯೇ ಆಡ್ ಎನ್ನು ಆಯ್ಕೆಯೊಂದು ಕಾಣಿಸಿಕೊಳ್ಳಿದೆ. ಇದಾದ ಮೇಲೆ ನಿಮ್ಮ ಮಾಹಿತಿಯೂ ಸೇವ್ ಆಗಲಿದೆ. ಇದರೊಂದಿಗೆ ನಿಮ್ಮ ಕುಟುಂಬದವರ ಮಾಹಿತಿಯನ್ನು ನೀವು ಆಡ್ ಮಾಡಬಹುದಾಗಿದೆ
ಇದಾದ ನಂತರದಲ್ಲಿ ನೀವು ಗ್ರಾಮೀಣ ಇಲ್ಲವೇ ನಗರ ಭಾಗದಲ್ಲಿ ವಾಸ ಮಾಡುತ್ತಿರುವ ಕುರಿತು ಮಾಹಿತಿಯನ್ನು ನೀಡಬೇಕಾಗಿದೆ. ಅಲ್ಲಿಯೇ ಆಯ್ಕೆಗಳು ಬರಲಿದ್ದು, ಅವುಗಳ ಮೇಲೆ ಕ್ಲಿಕ್ ಮಾಡಿದರೆ ಸಾಕು.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರದಲ್ಲಿ ನಿಮ್ಮ ರೆಷನ್ ಕಾರ್ಡ್ ಆಲ್ಲಿಯೇ ತೋರಿಸಲಿದ್ದು, ಅಲ್ಲಿಂದಲೇ ಪ್ರಿಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಹಿಂದೆ ಇದ್ದಂತಹ ಯಾವುದೇ ತೊಂದರೆಗಳು ಇದರಲ್ಲಿ ಇಲ್ಲ. ಕೇವಲ 10 ನಿಮಿಷದಲ್ಲಿ ನಿಮ್ಮ ರೆಷನ್ ಕಾರ್ಡ್ ಅನ್ನು ಪ್ರಿಂಟ್ ಮಾಡಿಕೊಳ್ಳಬಹುದು
ಈ ಹಿಂದಿನಂತೆ ನೀವು ರೇಷನ್ ಕಾರ್ಡ್ ಮಾಡಿಸಲು ಅಲ್ಲಿಂದ ಇಲ್ಲಿಗೆ ಅಲೆಯೂವ ಅಗತ್ಯವೇ ಇರುವುದಿಲ್ಲ. ಬದಲಾಗಿ ಕ್ಷಣ ಮಾತ್ರದಲ್ಲಿಯೇ ನಿಮ್ಮ ಮನೆಯಲ್ಲಿಯೇ ಕುಳಿತು ರೆಷನ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದಾಗಿದೆ